About 'ATMA' - in Upanishads
Few days ago, I picked up a book on 'bruhadaranyaka-upanishad' just out of curiosity. Found it very tough to understand, even with explanation. Could not go through even a single page, as it did not appeal to me much. But, what I find is, an occassional and random flip through the book makes the subject interesting.
I find it useful for me to remember if I keying in some of the lines I found interesting... I prefer it to be in Kannada (as-is) from the book. I would not make any justice if I attempt a translation.

- madhukara
ಮಧುಕಾಂಡ, ಎರಡನೆಯ ಅಧ್ಯಾಯ, ನಾಲ್ಕನೆಯ ಬ್ರಾಹ್ಮಣ
ಸಾ ಹೋವಾಚ ಮೈತ್ರೇಯೀ, ಯೇನಾಹಂ ನಾಮೃತಾ ಸ್ಯಾಂ ಕಿಮಹಂ ತೇನ ಕುರ್ಯಾಮ್?
ಯದೇವ ಭಗವಾನ್ ವೇದ ತದೇವ ಮೇ ಬ್ರೂಹೀತಿ ||೩||
ಸಾ ಮೈತ್ರೇಯೀ ಉವಾಚ ಹ, ಯೇನ=ಯಾವುದರಿಂದ ಅಹಂ=ನಾನು ಅಮೃತಾ ನ ಸ್ಯಾಂ=ಅಮೃತಳಾಗುವುದಿಲ್ಲವೋ ತೇನ=ಅದರಿಂದ ಅಹಂ=ನಾನು ಕಿ೦ ಕುರ್ಯಾಮ್=ಏನು ಮಾಡಲಿ? ಭಗವಾನ್=ಭಗವಂತನಾದ ನೀನು ಯತ್ ಏವ=ಯಾವುದನ್ನು ವೇದ=ಅರಿತುಕೊಂದಿರುವೆಯೋ ತತ್ ಏವ= ಅದನ್ನೇ ಮೇ=ನನಗೆ ಹೇಳು ಇತಿ.
ಮೈತ್ರೇಯೀ: ಯಾವುದರಿಂದ ನಾನು ಅಮೃತಳಾಗುವುದಿಲ್ಲವೊ ಅದರಿಂದ ಏನು ಮಾಡಲಿ? ಹೇ ಭಗವಾನ್, ನೀನು ಯಾವುದನ್ನು ಅರಿತು ಕೊಂಡಿರುವೆಯೋ ಅದನ್ನೇ ನನಗೆ ಹೇಳು.
ಯಃ=ಯಾವನು ಬ್ರಹ್ಮ=ಬ್ರಾಹ್ಮಣನನ್ನು ಆತ್ಮನಃ ಅನ್ಯತ್ರ=ಆತ್ಮನಿಗಿಂತ ಭಿನ್ನನೆಂದು ವೇದ=ಅರಿಯುತ್ತಾನೆಯೋ ತಂ=ಅವನನ್ನು ಬ್ರಹ್ಮ=ಬ್ರಾಹ್ಮಣನು ಪರಾದಾತ್=ನಿರಾಕರಿಸುವನು. [ಉಳಿದ ಅಂಶವನ್ನು ಹಿಂದಿನಂತೆಯೇ ಅನ್ವಯಿಸಿ ಕೊಳ್ಳಬೇಕು] ಇದಂ=ಈ ಬ್ರಹ್ಮ=ಬ್ರಾಹ್ಮಣ, ಇದಂ ಕ್ಷತ್ತ್ರಂ=ಈ ಕ್ಷತ್ರಿಯ ಇಮೇ ಲೋಕಾಃ=ಈ ಲೋಕಗಳು, ಇಮೇ ದೇವಾಃ=ಈ ದೇವತೆಗಳು, ಇಮಾನಿ ಭೂತಾನಿ=ಈ ಪ್ರಾಣಿಗಳು, ಇದಂ ಸರ್ವಂ=ಈ ಸರ್ವವು ಯತ್ [ಯಃ] ಅಯಂ ಆತ್ಮಾ=ಯಾವ ಈ ಆತ್ಮನೋ.
ಯಾಜ್ಞವಲ್ಕ್ಯನು ಹೇಳುತ್ತಾನೆ -
'ಯಾವನು ಬ್ರಾಹ್ಮಣನನ್ನು ಆತ್ಮನಿಗಿಂತ ಭಿನ್ನನೆಂದು ಅರಿಯುತ್ತನೆಯೋ ಅವನನ್ನು ಬ್ರಾಹ್ಮಣನು ನಿರಾಕರಿಸುವನು. ಯಾವನು ಕ್ಷತ್ರಿಯನನ್ನು ಆತ್ಮನಿಗಿಂತ ಭಿನ್ನನೆಂದು ಅರಿಯುತ್ತಾನೋ ಅವನನ್ನು ಕ್ಷತ್ರಿಯನು ನಿರಾಕರಿಸುವನು. ಯಾವನು ಲೋಕಗಳನ್ನು ಆತ್ಮನಿಗಿಂತ ಭಿನ್ನನೆಂದು ಅರಿಯುತ್ತಾನೆಯೋ ಅವನನ್ನು ಲೋಕಗಳು ನಿರಾಕರಿಸುವುವು. ಯಾವನು ದೇವತೆಗಳನ್ನು ಆತ್ಮನಿಗಿಂತ ಭಿನ್ನರೆಂದು ಅರಿಯುತ್ತಾನೆಯೋ ಅವನನ್ನು ದೇವತೆಗಳು ನಿರಾಕರಿಸುವರು. ಯಾವನು ಪ್ರಾಣಿಗಳನ್ನು ಆತ್ಮನಿಗಿಂತ ಭಿನ್ನನೆಂದು ಅರಿಯುತ್ತಾನೆಯೋ ಅವನನ್ನು ಪ್ರಾಣಿಗಳು ನಿರಾಕರಿಸುವುವು. ಯಾವನು ಎಲ್ಲವನ್ನೂ ಆತ್ಮನಿಗಿಂತ ಭಿನ್ನವೆಂದು ಅರಿಯುತಾನೆಯೋ ಅವನನ್ನು ಎಲ್ಲವೂ ನಿರಾಕರಿಸುವುವು. ಈ ಬ್ರಾಹ್ಮಣ, ಈ ಕ್ಷತ್ರಿಯ, ಈ ಲೋಕಗಳು, ಈ ದೇವತೆಗಳು, ಈ ಪ್ರಾಣಿಗಳು, ಈ ಸರ್ವವು - ಈ ಆತ್ಮನೇ'
ಸಹ ಯಥಾ=ಹೇಗೆ ಉದಕೇ=ನೀರಿನಲ್ಲಿ ಪ್ರಾಸ್ತಃ=ಹಾಕಲ್ಪಟ್ಟ ಸೈ೦ಧವಖಿಲ್ಯಃ=ಉಪ್ಪಿನ ಗಟ್ಟಿಯು ಉದಕಂ ಏವ ಅನುವಿಲೀಯೇತ=ನೀರನ್ನೇ ಅನುಸರಿಸಿ ಲಯವಾಗುತ್ತದೆಯೋ, ಅಸ್ಯ ಉದ್ಗ್ರಹಣಾಯ ಇವ ನ ಹ ಸ್ಯಾತ್=ಅದನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲವೋ, ಯತಃ ಯತಃ ತು ಆದದೀತ=ಆದರೆ ಎಲ್ಲಿಂದ ತೆಗೆದುಕೊಂಡರೂ ಲವಣಂ ಏವಂ=ಉಪ್ಪೇ ಆಗಿರುವುದೋ ಏವಂ ವೈ=ಹಾಗೆಯೇ ಅರೇ=ಎಲೆ ಅನಂತಂ=ಅನಂತವೂ ಅಪಾರಂ=ಅಪಾರವೂ ಆದ ಇದಂ ಮಹತ್ ಭೂತಂ=ಈ ಮಹತ್ ಪರಮಾರ್ಥವು ವಿಜ್ಞಾನಘನಃ ಏವ=ವಿಜ್ನಾನಘನವೇ ಆಗಿದೆ. ಏತೇಭ್ಯಃ ಭೂತೇಭ್ಯಃ=ಈ ಭೂತಗಳಿಂದ ಸಮುತ್ಥಾಯ=ಮೇಲಕ್ಕೆದ್ದು ತಾನಿ ಏವ=ಅವುಗಳನ್ನೇ ಅನು=ಅನುಸರಿಸಿ ವಿನಶ್ಯತಿ=ನಾಶವಾಗುತ್ತದೆ; ಪ್ರೇತ್ಯ=ಇಲ್ಲಿಂದ ಹೋದ ಮೇಲೆ ಸಂಜ್ಞಾ ನ ಅಸ್ತಿ=ವಿಶೇಷಜ್ನಾನವಿರುವುದಿಲ್ಲ. ಅರೇ=ಎಲೆ, ಇತಿ ಬ್ರವೀಮಿ=ಹೀಗೆ ಹೇಳುತ್ತೇನೆ ಇತಿ=ಎಂದು ಯಾಜ್ನವಲ್ಕ್ಯಃ ಉವಾಚ ಹ.
ಹೇಗೆ ನೀರಿನಲ್ಲಿ ಹಾಕಲ್ಪಟ್ಟ ಉಪ್ಪಿನ ಗಟ್ಟಿಯು ನೀರನ್ನೇ ಅನುಸರಿಸಿ ಲಯವಾಗುತ್ತದೆಯೋ ಮತ್ತು ಉಪ್ಪಿನ ಹರಳನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲವೋ, ಆದರೆ ಎಲ್ಲೆಲ್ಲಿಂದ ತೆಗೆದುಕೊಂಡರೂ ಉಪ್ಪೇ ಆಗಿರುವುದೋ, ಹಾಗೆಯೇ ಎಲೆ ಮೈತ್ರೇಯೀ, ಅನಂತವೂ ಅಪಾರವೂ ಆದ ಈ ಮಹತ್ ಪರಮಾರ್ಥವು ವಿಜ್ನಾನಘನವೇ ಆಗಿದೆ. ಆತ್ಮನ ಭಿನ್ನತೆಯು ಈ ಭೂತಗಳಿಂದ ಉಂಟಾಗಿ ಭೂತವರ್ಗದ ಲಯದೊಂದಿಗೆ ತಾನೂ ಲಯವಾಗುತ್ತದೆ. ದೇಹೆಂದ್ರಿಯಗಳಿಂದ ಮುಕ್ತಿ ಹೊಂದಿದ ಮೇಲೆ ವಿಶೇಷಜ್ನಾನವಿರುವುದಿಲ್ಲ. ಎಲೆ ಮೈತ್ರೇಯೀ ಇದನ್ನೇ ನಾನು ಹೇಳುವುದು.' ಹೀಗೆ ಯಾಜ್ನ್ಯವಲ್ಕ್ಯನು ಹೇಳಿದನು.

ಬ್ರಹ್ಮ ತಂ ಪರಾದಾದ್ಯೋನ್ಯತ್ರಾತ್ಮನೋ ಬ್ರಹ್ಮ ವೇದ, ಕ್ಷತ್ತ್ರ ತಂ ಪರಾದಾದ್ಯೋನ್ಯತ್ರಾತ್ಮನಃ ಕ್ಷತ್ತ್ರಂ ವೇದ, ಲೋಕಾಸ್ತಂ ಪರಾದುರ್ಯೋ ಅನ್ಯತ್ರಾತ್ಮನೋ ಲೋಕಾನ್ ವೇದ, ದೇವಾಸ್ತಂ ಪರಾದುರ್ಯೋನ್ಯತ್ರಾತ್ಮನೋ ದೆವಾನ್ ವೇದ, ಭೂತಾನಿ ತಂ ಪರಾದುರ್ಯೋ ಅನ್ಯತ್ರಾತ್ಮನೋ ಭೂತಾನಿ ವೇದ, ಸರ್ವಂ ತಂ ಪರಾದಾದ್ಯೋನ್ಯತ್ರಾತ್ಮನಃ ಸರ್ವಂ ವೇದ; ಇದಂ ಬ್ರಹ್ಮ, ಇದಂ ಕ್ಷತ್ತ್ರಂ, ಇಮೆ ಲೋಕಾಃ, ಇಮೇ ದೇವಾಃ, ಇಮಾನಿ ಭೂತಾನಿ, ಇದಂ ಸರ್ವಂ ಯದಯಮಾತ್ಮಾ ||೬||
ಯಃ=ಯಾವನು ಬ್ರಹ್ಮ=ಬ್ರಾಹ್ಮಣನನ್ನು ಆತ್ಮನಃ ಅನ್ಯತ್ರ=ಆತ್ಮನಿಗಿಂತ ಭಿನ್ನನೆಂದು ವೇದ=ಅರಿಯುತ್ತಾನೆಯೋ ತಂ=ಅವನನ್ನು ಬ್ರಹ್ಮ=ಬ್ರಾಹ್ಮಣನು ಪರಾದಾತ್=ನಿರಾಕರಿಸುವನು. [ಉಳಿದ ಅಂಶವನ್ನು ಹಿಂದಿನಂತೆಯೇ ಅನ್ವಯಿಸಿ ಕೊಳ್ಳಬೇಕು] ಇದಂ=ಈ ಬ್ರಹ್ಮ=ಬ್ರಾಹ್ಮಣ, ಇದಂ ಕ್ಷತ್ತ್ರಂ=ಈ ಕ್ಷತ್ರಿಯ ಇಮೇ ಲೋಕಾಃ=ಈ ಲೋಕಗಳು, ಇಮೇ ದೇವಾಃ=ಈ ದೇವತೆಗಳು, ಇಮಾನಿ ಭೂತಾನಿ=ಈ ಪ್ರಾಣಿಗಳು, ಇದಂ ಸರ್ವಂ=ಈ ಸರ್ವವು ಯತ್ [ಯಃ] ಅಯಂ ಆತ್ಮಾ=ಯಾವ ಈ ಆತ್ಮನೋ.
ಯಾಜ್ಞವಲ್ಕ್ಯನು ಹೇಳುತ್ತಾನೆ -
'ಯಾವನು ಬ್ರಾಹ್ಮಣನನ್ನು ಆತ್ಮನಿಗಿಂತ ಭಿನ್ನನೆಂದು ಅರಿಯುತ್ತನೆಯೋ ಅವನನ್ನು ಬ್ರಾಹ್ಮಣನು ನಿರಾಕರಿಸುವನು. ಯಾವನು ಕ್ಷತ್ರಿಯನನ್ನು ಆತ್ಮನಿಗಿಂತ ಭಿನ್ನನೆಂದು ಅರಿಯುತ್ತಾನೋ ಅವನನ್ನು ಕ್ಷತ್ರಿಯನು ನಿರಾಕರಿಸುವನು. ಯಾವನು ಲೋಕಗಳನ್ನು ಆತ್ಮನಿಗಿಂತ ಭಿನ್ನನೆಂದು ಅರಿಯುತ್ತಾನೆಯೋ ಅವನನ್ನು ಲೋಕಗಳು ನಿರಾಕರಿಸುವುವು. ಯಾವನು ದೇವತೆಗಳನ್ನು ಆತ್ಮನಿಗಿಂತ ಭಿನ್ನರೆಂದು ಅರಿಯುತ್ತಾನೆಯೋ ಅವನನ್ನು ದೇವತೆಗಳು ನಿರಾಕರಿಸುವರು. ಯಾವನು ಪ್ರಾಣಿಗಳನ್ನು ಆತ್ಮನಿಗಿಂತ ಭಿನ್ನನೆಂದು ಅರಿಯುತ್ತಾನೆಯೋ ಅವನನ್ನು ಪ್ರಾಣಿಗಳು ನಿರಾಕರಿಸುವುವು. ಯಾವನು ಎಲ್ಲವನ್ನೂ ಆತ್ಮನಿಗಿಂತ ಭಿನ್ನವೆಂದು ಅರಿಯುತಾನೆಯೋ ಅವನನ್ನು ಎಲ್ಲವೂ ನಿರಾಕರಿಸುವುವು. ಈ ಬ್ರಾಹ್ಮಣ, ಈ ಕ್ಷತ್ರಿಯ, ಈ ಲೋಕಗಳು, ಈ ದೇವತೆಗಳು, ಈ ಪ್ರಾಣಿಗಳು, ಈ ಸರ್ವವು - ಈ ಆತ್ಮನೇ'
ಸ ಯಥಾ ಸೈ೦ಧವಖಿಲ್ಯ ಉದಕೇ ಪ್ರಾಸ್ತ ಉದಕಮೇವಾನುವಿಲೀಯೇತ, ನ ಹಾಸ್ಯೋದ್ಗ್ರಹಣಾಯೇವ ಸ್ಯಾತ್, ಯತೋ ಯತಸ್ತ್ವಾದದೀತ ಲವಣಮೇವ, ಏವಂ ವಾ ಅರ ಇದಂ ಮಹದ್ ಭೂತಮನಂತಮಪಾರಂ ವಿಜ್ಞಾನಘನ ಏವ| ಏತೇಭ್ಯೋ ಭೂತೇಭ್ಯಃ ಸಮುತ್ಥಾಯ ತಾನ್ಯೇವಾನು ವಿನಶ್ಯತಿ, ನ ಪ್ರೇತ್ಯ ಸಂಜ್ಞಾಸ್ತೀತ್ಯರೇ ಬ್ರವೀಮೀತಿ ಹೊವಾಚ ಯಾಜ್ನವಲ್ಕ್ಯಃ ||೧೨||
ಸಹ ಯಥಾ=ಹೇಗೆ ಉದಕೇ=ನೀರಿನಲ್ಲಿ ಪ್ರಾಸ್ತಃ=ಹಾಕಲ್ಪಟ್ಟ ಸೈ೦ಧವಖಿಲ್ಯಃ=ಉಪ್ಪಿನ ಗಟ್ಟಿಯು ಉದಕಂ ಏವ ಅನುವಿಲೀಯೇತ=ನೀರನ್ನೇ ಅನುಸರಿಸಿ ಲಯವಾಗುತ್ತದೆಯೋ, ಅಸ್ಯ ಉದ್ಗ್ರಹಣಾಯ ಇವ ನ ಹ ಸ್ಯಾತ್=ಅದನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲವೋ, ಯತಃ ಯತಃ ತು ಆದದೀತ=ಆದರೆ ಎಲ್ಲಿಂದ ತೆಗೆದುಕೊಂಡರೂ ಲವಣಂ ಏವಂ=ಉಪ್ಪೇ ಆಗಿರುವುದೋ ಏವಂ ವೈ=ಹಾಗೆಯೇ ಅರೇ=ಎಲೆ ಅನಂತಂ=ಅನಂತವೂ ಅಪಾರಂ=ಅಪಾರವೂ ಆದ ಇದಂ ಮಹತ್ ಭೂತಂ=ಈ ಮಹತ್ ಪರಮಾರ್ಥವು ವಿಜ್ಞಾನಘನಃ ಏವ=ವಿಜ್ನಾನಘನವೇ ಆಗಿದೆ. ಏತೇಭ್ಯಃ ಭೂತೇಭ್ಯಃ=ಈ ಭೂತಗಳಿಂದ ಸಮುತ್ಥಾಯ=ಮೇಲಕ್ಕೆದ್ದು ತಾನಿ ಏವ=ಅವುಗಳನ್ನೇ ಅನು=ಅನುಸರಿಸಿ ವಿನಶ್ಯತಿ=ನಾಶವಾಗುತ್ತದೆ; ಪ್ರೇತ್ಯ=ಇಲ್ಲಿಂದ ಹೋದ ಮೇಲೆ ಸಂಜ್ಞಾ ನ ಅಸ್ತಿ=ವಿಶೇಷಜ್ನಾನವಿರುವುದಿಲ್ಲ. ಅರೇ=ಎಲೆ, ಇತಿ ಬ್ರವೀಮಿ=ಹೀಗೆ ಹೇಳುತ್ತೇನೆ ಇತಿ=ಎಂದು ಯಾಜ್ನವಲ್ಕ್ಯಃ ಉವಾಚ ಹ.
ಹೇಗೆ ನೀರಿನಲ್ಲಿ ಹಾಕಲ್ಪಟ್ಟ ಉಪ್ಪಿನ ಗಟ್ಟಿಯು ನೀರನ್ನೇ ಅನುಸರಿಸಿ ಲಯವಾಗುತ್ತದೆಯೋ ಮತ್ತು ಉಪ್ಪಿನ ಹರಳನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲವೋ, ಆದರೆ ಎಲ್ಲೆಲ್ಲಿಂದ ತೆಗೆದುಕೊಂಡರೂ ಉಪ್ಪೇ ಆಗಿರುವುದೋ, ಹಾಗೆಯೇ ಎಲೆ ಮೈತ್ರೇಯೀ, ಅನಂತವೂ ಅಪಾರವೂ ಆದ ಈ ಮಹತ್ ಪರಮಾರ್ಥವು ವಿಜ್ನಾನಘನವೇ ಆಗಿದೆ. ಆತ್ಮನ ಭಿನ್ನತೆಯು ಈ ಭೂತಗಳಿಂದ ಉಂಟಾಗಿ ಭೂತವರ್ಗದ ಲಯದೊಂದಿಗೆ ತಾನೂ ಲಯವಾಗುತ್ತದೆ. ದೇಹೆಂದ್ರಿಯಗಳಿಂದ ಮುಕ್ತಿ ಹೊಂದಿದ ಮೇಲೆ ವಿಶೇಷಜ್ನಾನವಿರುವುದಿಲ್ಲ. ಎಲೆ ಮೈತ್ರೇಯೀ ಇದನ್ನೇ ನಾನು ಹೇಳುವುದು.' ಹೀಗೆ ಯಾಜ್ನ್ಯವಲ್ಕ್ಯನು ಹೇಳಿದನು.
Comments
Post a Comment
Please leave a comment if you like the post.