A discourse by Siddeshwara Swamy - 4th May 2008

4ನೇ ಮೇ 2008, ಭಾನುವಾರ ಸಂಜೆ 5 ಗಂಟೆಗೆ ಎಸ್.ಷಡಕ್ಷರಿ ಅವರ ‘ಕ್ಷಣಹೊತ್ತು ಆಣಿಮುತ್ತು: ಭಾಗ-೨’ ಕೃತಿಯನ್ನು ಶ್ರೀ ಸಿದ್ಧೇಶ್ವರ ಸ್ವಾಮಿಗಳು ಬಿಡುಗಡೆ ಮಾಡುವ ಕಾರ್ಯಕ್ರಮವಿತ್ತು. ಅದಕ್ಕೂ ಮುನ್ನ, 4 ರಿಂದ 5 ರವರೆಗೆ ಸಿದ್ಧೇಶ್ವರ ಸ್ವಾಮಿಗಳ ಉಪನ್ಯಾಸ ಕಾರ್ಯಕ್ರಮವಿತ್ತು. ಇಲ್ಲಿ, ಆ ಉಪನ್ಯಾಸದ ಧ್ವನಿಮುದ್ರಣವನ್ನು ಅಂಟಿಸುತ್ತಿದ್ದೇನೆ.

ಶ್ರೀ ಶಂಕರ ಶ್ಯಾನುಭೋಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬಸವಣ್ಣನವರ "ಉಳ್ಳವರು ಶಿವಾಲಯವ ಮಾಡುವರು" ವಚನವನ್ನು ಸುಶ್ರಾವ್ಯವಾಗಿ ಹಾಡಿದರು. ಇದರ ಧ್ವನಿಮುದ್ರಣವನ್ನು ನಿಮ್ಮ ಗಣಕಯಂತ್ರಕ್ಕೆ ಇಳಿಸಿಕೊಳ್ಳಲು, ಇಲ್ಲಿ ಕ್ಲಿಕ್ಕಿಸಿರಿ.
ಅಂತರ್ಜಾಲದಲ್ಲಿಯೇ ನೇರವಾಗಿ ಕೇಳಲು ಇಲ್ಲಿ ಕ್ಲಿಕ್ಕಿಸಿ: boomp3.com


ಪ್ರಾರಂಭದಲ್ಲಿ ಮೈಕಾಸುರನ ಮುನಿಸಿನಿಂದ ಉಪನ್ಯಾಸಕರ ಧ್ವನಿಯು ನಾನು ಕುಳಿತಲ್ಲಿಗೆ ತಲುಪುವ ಹೊತ್ತಿಗೆ ಕ್ಷೀಣವಾಗುತ್ತಿತ್ತು. ಆದುದರಿಂದ, ಮೊದಲ ಕೆಲವು ನಿಮಿಷಗಳು ಮುದ್ರಣಗೊಂಡಿಲ್ಲ. ಈ ಮೊದಲ ಕೆಲವು ನಿಮಿಷಗಳ ಸಾರಾಂಶವನ್ನು ನನ್ನ ತಿಳುವಳಿಕೆಗನುಸಾರವಾಗಿ ತಿಳಿಸುತ್ತೇನೆ:

"ಬಸವಣ್ಣನವರ ಕಾಲದಲ್ಲಿ ‘ಹಡಪದ ಅಪ್ಪಣ್ಣ’ - ಎಂಬ ಒಬ್ಬ ಸಾಮಾನ್ಯ ಕ್ಷೌರಿಕನೊಬ್ಬನಿದ್ದ. ಅವನು ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡದಿದ್ದರೂ, ಅವನ ವಚನಗಳನ್ನು ಓದಿದರೆ ಅವನ ಪ್ರಬುದ್ಧತೆಯ ಅರಿವಾಗುತ್ತದೆ", ಎಂದು ಹೇಳಿ ಸಿದ್ಧೇಶ್ವರ ಸ್ವಾಮಿ, ಹಡಪದ ಅಪ್ಪಣ್ಣನ ಒಂದು ವಚನವನ್ನು ಉದಾಹರಿಸಿದರು. ಮುಂದುವರಿದು, ಈ ದೇಹಕ್ಕೆ ಅದರದೇ ಆದ ಇತಿ-ಮಿತಿ ಇದೆ. ಆದರೆ, ಮನಸ್ಸಿಗೆ ಈ ಮಿತಿಗಳು ಅನ್ವಯವಾಗುವುದಿಲ್ಲ. ಮನಸ್ಸು ಎಷ್ಟು ಎತ್ತರಕ್ಕೆ ಹೋಗಬಹುದು ಎನ್ನುವುದಕ್ಕೆ, ಸಾಮಾನ್ಯ ಮನುಷ್ಯನಾಗಿ, ವಿಶೇಷ ತರಬೇತಿಯನ್ನು ಹೊಂದದೆಯೂ, ಉತ್ತಮವಾದಂತಹ ವಚನಗಳನ್ನು ರಚಿಸಿದ ಹಡಪದ ಅಪ್ಪಣ್ಣ ಮತ್ತು ಅವನ ಹೆಂಡತಿ ಲಿಂಗಮ್ಮ ಇವರೇ ಸಾಕ್ಷಿ - ಎಂದು ಹೇಳಿದರು. ಇಲ್ಲಿಂದ ಮುಂದೆ ನೀವೇ ಧ್ವನಿಮುದ್ರಣವನ್ನು ಕೇಳಿ ಆನಂದಿಸಿ. boomp3.com

Note: I was not able to upload the above 23MB MP3 file (TalkBySiddeshwaraSwamy.mp3) for download. If you are interested in getting a copy of MP3 file, please contact me.

Comments

Popular Posts